ವಿನ್ಯಾಸ
ವಿನ್ಯಾಸವು ಒಂದು ವಸ್ತು ಅಥವಾ ವ್ಯವಸ್ಥೆಯ ನಿರ್ಮಾಣಕ್ಕೆ ಅಥವಾ ಒಂದು ಚಟುವಟಿಕೆ ಅಥವಾ ಪ್ರಕ್ರಿಯೆಯ ಅನುಷ್ಠಾನಕ್ಕೆ ಮಾಡಲಾದ ನಕ್ಷೆ ಅಥವಾ ವಿಶಿಷ್ಟ ವಿವರಣೆ, ಅಥವಾ ಮೂಲಮಾದರಿ, ಉತ್ಪನ್ನ ಅಥವಾ ಪ್ರಕ್ರಿಯೆಯ ರೂಪದಲ್ಲಿ ಆ ನಕ್ಷೆ ಅಥವಾ ವಿಶಿಷ್ಟ ವಿವರಣೆಯ ಪರಿಣಾಮವಾಗಿರುತ್ತದೆ.[೧] ಕೆಲವು ಸಂದರ್ಭಗಳಲ್ಲಿ, ಸ್ಪಷ್ಟವಾದ ಮೊದಲಿನ ನಕ್ಷೆಯಿಲ್ಲದೆ ಒಂದು ವಸ್ತುವಿನ ನೇರ ನಿರ್ಮಾಣವನ್ನು (ಉದಾಹರಣೆಗೆ ಕರಕುಶಲ ಕೆಲಸ, ಸ್ವಲ್ಪಮಟ್ಟಿಗಿನ ಶಿಲ್ಪವಿಜ್ಞಾನ, ಸಂಕೇತೀಕರಣ ಮತ್ತು ಚಿತ್ರಾತ್ಮಕ ವಿನ್ಯಾಸ) ಕೂಡ ವಿನ್ಯಾಸ ಚಟುವಟಿಕೆ ಎಂದು ಪರಿಗಣಿಸಬಹುದು. ವಿನ್ಯಾಸವು ಸಾಮಾನ್ಯವಾಗಿ ಕೆಲವು ಗುರಿಗಳು ಮತ್ತು ನಿರ್ಬಂಧಗಳನ್ನು ತೃಪ್ತಿಪಡಿಸಬೇಕಾಗುತ್ತದೆ, ಮತ್ತು ಸೌಂದರ್ಯದ, ಕಾರ್ಯತ್ಮಕ, ಆರ್ಥಿಕ ಅಥವಾ ಸಮಾಜರಾಜಕೀಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು, ಮತ್ತು ಅದು ಒಂದು ನಿರ್ದಿಷ್ಟ ಪರಿಸರದೊಂದಿಗೆ ಪರಸ್ಪರ ಕಾರ್ಯನಡೆಸುವುದನ್ನು ನಿರೀಕ್ಷಿಸಲಾಗುತ್ತದೆ. ವಿನ್ಯಾಸಗಳ ಪ್ರಮುಖ ಉದಾಹರಣೆಗಳಲ್ಲಿ ವಾಸ್ತುಶಿಲ್ಪದ ನೀಲಿನಕ್ಷೆಗಳು, ಶಿಲ್ಪವಿಜ್ಞಾನದ ರೇಖಾಚಿತ್ರಗಳು, ವ್ಯಾಪಾರ ಪ್ರಕ್ರಿಯೆಗಳು, ವಿದ್ಯುನ್ಮಂಡಲ ರೇಖಾಚಿತ್ರಗಳು, ಮತ್ತು ಹೊಲಿಗೆ ವಿನ್ಯಾಸಗಳು ಸೇರಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-11-16. Retrieved 2019-11-28.